Thursday 30 August 2012

ನಾನು & ಸೋನು

ನಾನು & ಸೋನು

***************



ನಾನು » ಎ ಸೋನು ಏನ್ ಮಾಡ್ತಾ ಇದ್ದೀಯಾ ?

ಸೋನು » ಏನು ಇಲ್ಲಾ ಸುಮ್ಮನೆ ಕೂತಿದ್ದೆ , ಈಗ ನಿನ್ ಜೊತೆ ಮಾತಾಡ್ತಾ ಇದ್ದೀನಿ ..

ನಾನು » ಹೋ ಹೌದಾ ಹಾಗಾದ್ರೆ ಒಂದು ಕೆಲಸ ಕೊಡ್ತೀನಿ ಮಾಡ್ತಿಯಾ ?

ಸೋನು » ಮೊದಲು ಅದೇನು ಕೆಲಸ ಅಂತಾ ಸರಿಯಾಗಿ ಗೊತ್ತಾಗಬೇಕು , ಆಮೇಲೆ ಅದುನ್ನಾ ಮಾಡ್ತೀನೋ , ಬಿಡ್ತೀನೋ ಅಂತಾ ಹೇಳ್ತೀನಿ ..

ನಾನು » ಕೆಲಸ ತುಂಬಾ ಸುಲಭ ಇದ್ರೆ ಮಾಡ್ತೀಯಾ ?

ಸೋನು » ಮ್ ಓಕೆ , ಯೋಚನೆ ಮಾಡ್ತೀನಿ , ಸ್ವಲ್ಪ ಟೈಮ್ ಕೊಡು ..

ನಾನು » ಎಷ್ಟು ಟೈಮ್ ಬೇಕು ನಿಂಗೆ ಯೋಚನೆ ಮಾಡೋಕೆ ?

ಸೋನು » ಮ್ ಮ್ .. ಟೈಮ್ ಏನೂ ಬೇಡ , ಅದೇನು ಕೆಲಸ ಅಂತಾ ಹೇಳು , ಓಕೆ ನಾನ್ ಮಾಡ್ತೀನಿ ..

ನಾನು » ಆಮೇಲೆ ಅದು ಕಷ್ಟ ಅಂತಾ ನೀನ್ ಹೆದರಿ , ಒಬ್ಬಳೇ ಮಾಡೋಕ್ಕೆ ಆಗೋದಿಲ್ಲಾ ಅಂತಂದ್ರೆ ನಾನೇನ್ ಮಾಡ್ಲಿ ?

ಸೋನು » ಮೊದಲು ನೀನು ಯಾವ ಕೆಲಸ ಅಂತಾ ಹೇಳು , ನಿಂಗೊಸ್ಕರ ಯಾವ್ ಕೆಲಸ ಆದರೂ ಮಾಡ್ತೀನಿ .. 

ನಾನು » ನೀನು ಯಾಕೆ ಹೀಗೆ ಇದ್ದಕ್ಕಿದ್ದ ಹಾಗೆ ನಿರ್ಧಾರ ಮಾಡಿದ್ದು , ಈ ರೀತಿಯ ಆಲೋಚನೆ ಮಾಡಲು ಕಾರಣ ಏನು ?

ಸೋನು » ಅದೆಲ್ಲಾ ಆಮೇಲೆ ವಿವರವಾಗಿ ತಿಳಿಸುವೆ .. ಮೊದಲು ಆ ಕೆಲಸ ಯಾವುದು ಅಂತ ಗೊತ್ತಾಗಬೇಕು .. !!

(ಮುಂದುವರೆಯುವುದು ...... )

 (ಇದು ಮಾತುಗಳ ಕಥೆ .. ಎಲ್ಲವನ್ನೂ ಒಳಗೊಂಡ ಒಂದು ಪ್ರೇಮಕಥೆ.. ಸೋನು ಯಾರು ಅಂತಾ ಮಾತ್ರ ಕೇಳಬೇಡಿ .. ಇದು ಕಾಲ್ಪನಿಕ ಕಥೆ)


ನಾನು & ಸೋನು : click here » ನಾನು & ಸೋನು (ಮುಂದುವರೆದ ಭಾಗ : 1 )

2 comments:

  1. ಉತ್ತಮ ಸಂಭಾಷಣೆಕಾರ ಆಗೋ ಎಲ್ಲಾ ಲಕ್ಷಣಗಳಿವೆ. ಮಾತುಗಳ ನಾವಿನ್ಯತೆ ನನಗೆ ಮೆಚ್ಚುಗೆಯಾಯ್ತು.

    ReplyDelete