Wednesday 13 June 2012

ನೆನೆನೆನೆದು ನೆನೆಯುತ್ತ ನಿನ್ನನ್ನೇ ನಾ !!!!!!!!!


ನೆನೆನೆನೆದು  ನೆನೆಯುತ್ತ  ನಿನ್ನನ್ನೇ  ನಾ !!!!!!!!!
********************************************

ನೆನೆನೆನೆದು ನಿನ್ನೆ ನಾಳೆಗಳ
ನಿನಗಾಗಿ ನಾನಿಂದು ನುಡಿಯುವೆ
ನನ್ನೆದೆಯಾಳದ ನಾಲ್ಕು ನುಡಿಗಳ
ನಿನ್ನುಸಿರಾಗಿ ನನ್ನೆದೆಯಲ್ಲವಿತಿವೆ
ನಿನ್ನಾ ನೂರಾರು ನೆನಪುಗಳು

ಸವಿ ಸುಂದರ ಸ್ನೇಹದ  ಸಮಯ
ಸಂಗಾತಿಯೇ ಸ್ವಪ್ನ ಸುಂದರಿಯೇ
ಸ್ಪೂರ್ತಿಯ ಸಂಗೀತವು ಸಾಹಿತ್ಯವು
ಸಪ್ತಸ್ವರಗಳ ಸುಮಧುರಾಮೃತವು
ಸಂಜೆ ಸೂರ್ಯನ ಸ್ವರ್ಣಾಲಂಕಾರವು

ನೆನೆನೆನೆದು ನಿನ್ನಾ ನೆನೆಪುಗಳ
ನೆನಪುಗಳೊಡನೆ ನೀರಿನೋಕುಳಿ
ನಾನಲ್ಲಿ ನೆನೆನೆನೆದು ನಡುಗಿದೆ
ನಾ ನಿಂತಲ್ಲೇ ನಿಂತು ನೆನೆಯುತ್ತ
ನಾ ನಿನ್ನನ್ನೇ ನೆನೆಯುತ್ತ ನೆನೆನೆನೆದು

|| ಪ್ರಶಾಂತ್ ಖಟಾವಕರ್ ||

1 comment:

  1. ಹಾಡಿಕೊಂಡರೆ ಒಳ್ಳೆಯ ಪ್ರೇಮಭರಿತ ಭಾವಗೀತೆ. ಆಕೆಗೂ ಒಮ್ಮೆ ಕೇಳಿಸಿ ಬಿಡಿ. ಒಲಿಯದೆ ಇರಲು ಆಕೆ ಏನು ಕಲ್ಲು ಮನ್ಸ್ಸಿನವಳೇ ಪ್ರಶಾಂತು.

    ನಿಮ್ಮ ಕವನಗಳ ಹೂರಣ ಬರಬರುತ್ತಾ ಪಾಕಗೊಳ್ಳುತ್ತಲೇ ಇದೇ, ಓದಲು ಖುಷಿ!!!

    ಅಂದಹಾಗೆ ನನ್ನ ಬ್ಲಾಗಿಗೂ ಬನ್ನಿರಿ ಒಮ್ಮೆ.

    ReplyDelete