Tuesday 12 June 2012

ಇಂತೀ ನಿನ್ನ _._._ :)


ಇಂತೀ ನಿನ್ನ _._._ :)

ಸುಳ್ಳನೆಂದರೂ ಸರಿಯೇ
ಕಳ್ಳನೆಂದರೂ ಸರಿಯೇ
ತಪ್ಪು ಮಾಡದ ನಾನೇಕೆ
ಚಿಂತಿಸಿಲಿ ಪರರ ನುಡಿಗಳಿಗೆ

ನಾನೊಬ್ಬ ಸಾಮಾನ್ಯನನು
ಸುಮ್ಮನೆ ಮೌನಿಯಾಗುವೆ
ಸರಿ ತಪ್ಪುಗಳ ಲೆಕ್ಕ ಹಚ್ಚದೆ
ಸಾಕಿನ್ನು ಕಿತ್ತಾಟ ಓ ಗೆಳತಿ

ಬಾ ಇನ್ನು ಬರಿದಾದ ನನ್ನ ಬಾಳಿನೊಳು
ತುಂಬು ನೀ ನನ್ನ ಪ್ರೀತಿಯ ಹೃದಯವ
ಹಚ್ಚು ಪ್ರೇಮದ ಜ್ವಾಲೆಯ ನಗುನಗುತ
ಬೆಳಗಲದು ಇಡೀ ಜಗಕೆ ನಮ್ಮ ಪ್ರೀತಿಯ

ಇಂತೀ ನಿನ್ನ ಪ್ರೀತಿಯ

|| ಪ್ರಶಾಂತ್ ಖಟಾವಕರ್ ||

1 comment:

  1. ಆಕೆ ಹತ್ತಿರವಾಗೋ ಕಾಲ ದೂರದಲ್ಲಿಲ್ಲ ಮತ್ತು ಆಮೇಲೆ ವಿರಹ ವೇದನೆ ಇಲ್ಲ!

    ReplyDelete