Tuesday 13 March 2012

ಜೀವನ ನಾಟಕರಂಗ


ಜೀವನ ನಾಟಕರಂಗ
*****************


ಜೀವನ ನಾಟಕರಂಗ , ನಾನೊಬ್ಬ ಪಾತ್ರಧಾರಿ
ಆ ದಿನಗಳ ನೆನಪು , ಬಾಳೊಂದು ಚದುರಂಗದಾಟ

ಮುಖಕ್ಕೆ ಬಣ್ಣ ಹಚ್ಚದೆಯೇ ಮೊದಲ ಪಾತ್ರ
ನಾನಲ್ಲಿ ಶ್ರೀ ಗಣೇಶ ಮುಖವಾಡ ಧರಿಸಿ
ಕೈಯಲ್ಲಿ ಹಿಡಿದು ಕೋವಿ ವೀರ ಪ್ರತಾಪ
ನಾನಲ್ಲಿ ವೀರ ಸೈನಿಕ ಮತ್ತೊಂದು ಪಾತ್ರ

ಗಡ್ಡೆ ಗೆಣಸು ತಿನ್ನುತ ಮರೆದೆಲೆಗಳೇ ಉಡುಪು
ಕಾಡು ಮನುಷ್ಯ ಜೀವಕ್ಕೆ ಜೀವ ಬಲಿ ನಾಟಕವಿಲ್ಲಿ
ನೇಗಿಲ ಹೊತ್ತು ಹೊಲದಲ್ಲಿ ಬದುಕು ಸಣ್ಣ ರೈತ
ಅಸ್ತಿ ಜಗಳ ಸತ್ತವನಿಗೆ ಮರುಜನ್ಮ ಶ್ರೀಮಂತ ದ್ವಿಪಾತ್ರ

ಕರೋಡ್`ಪತಿ ಕಥೆಯಲ್ಲಿ ಮುಖ್ಯಪಾತ್ರ ನಾನೇ ನಾಯಕ
ಎಲ್ಲವೂ ನಾಟಕ ಕೆಲವು ಅತಿಥಿ ಪಾತ್ರ ಹಲವು ಹಾಸ್ಯ ಪಾತ್ರ
ಇತಿಹಾಸದಲ್ಲಿ ರಾಜರು ಹೋರಾಟಗಾರರು ಮಹಾಪುರುಷರು
ಚಂದ್ರಶೇಖರ ಅಜಾದ್ ದೇಶಪ್ರೇಮ ಸ್ಕೌಟ್  ಕಾರ್ಯಕ್ರಮದಲ್ಲಿ 

ಹಿಂದೂ ಮುಸ್ಲಿಂ ಭಾಯ್ ಭಾಯ್ ನಾನಲ್ಲಿ ಅಕ್ಬರ್ ಖಾನ್
ಗೆಳಯನ ತೊಂದರೆ ನಾನೇ ತಕ್ಷಣಕ್ಕೆ ಪೀಟರ್ ಫ್ರಂ ಪ್ಯಾರಿಸ್
ರಾಜ ಮಹಾರಾಜ ಎಂದ ಕ್ಷಣದಲ್ಲೇ ಗಂಭೀರತೆ ಸ್ವಭಾವ
ಹೈದರ್ ಅಲಿ , ಮದಕರಿನಾಯಕ , ನಾನೇ ಭೀಮ , ರಾವಣ

ಶ್ರೀ ಕೃಷ್ಣದೇವರಾಯ , ಸಂಗೊಳ್ಳಿ ರಾಯಣ್ಣ , 
ಎರಡು ನಿಮಿಷದ ಅರ್ಜುನ , ಇನ್ನೂ ಉಂಟು 
ಜೀವನ ನಾಟಕರಂಗದಲ್ಲಿ ಪರಿಪರಿಯ ಪಾತ್ರಗಳು
ಎಲ್ಲವು ಕೇವಲ ಆ ದಿನಗಳ ನೆನಪಿನ ಕ್ಷಣಗಳು

ಅಂದಿತ್ತು ಸುಂದರ ಕನಸುಗಳಿಗೆ ಪ್ರೋತ್ಸಾಹ
ಇಂದೆಲ್ಲಾ ಆ ಕನಸುಗಳು ಸ್ವಾರ್ಥಕ್ಕೆ ಬಲಿಯಾಗಿ
ಜೀವನ ಬದಲಾಗಿ ಬರೆಯಲು ಬಗೆಬಗೆಯ ಕಲ್ಪನೆ
ಎಲ್ಲದಕ್ಕೂ ಕಾರಣ ಬಾಳೊಂದು ಚದುರಂಗದಾಟ

ಜೀವನ ನಾಟಕರಂಗ , ನಾನೊಬ್ಬ ಪಾತ್ರಧಾರಿ
ಆ ದಿನಗಳ ನೆನಪು , ಬಾಳೊಂದು ಚದುರಂಗದಾಟ



|| ಪ್ರಶಾಂತ್ ಖಟಾವಕರ್ ||


ನೆನಪಿನ ಕವನ , ಸ್ಪೂರ್ತಿಯ ಕಾರಣ , ಇದೂ ನಾನೇ
ಪಾತ್ರ : ಶ್ರೀ ಕೃಷ್ಣದೇವರಾಯ ,  ನಾಟಕ : ವಿಜಯನಗರ ಸಾಮ್ರಾಜ್ಯ

1 comment:

  1. ನೀವೇ ಪಾತ್ರವಾಗಿ ಅಲ್ಲಿಯ ಹೂರಣವಾದಾಗ ಇಂತಹ ಕಾವ್ಯ ಸಾಧ್ಯ. ಚೆನ್ನಾಗಿದೆ.

    ReplyDelete