Friday 20 January 2012

ಈ ಪ್ರೀತಿಯ ನಾ ಏನೆಂದು ಕರೆಯಲಿ.. ?


ಈಗಿಲ್ಲಿ ನೀವೇ ಹೇಳಿ.. :)
ಈ ಪ್ರೀತಿಯ ನಾ ಏನೆಂದು ಕರೆಯಲಿ.. ?

ಮೊದಮೊದಲು ಕವಿಯೊಬ್ಬ
ಬರೆದ ಪ್ರೇಮ ಕವನ..
ಅದ ಕಂಡ ಕನ್ನಡದ ಕನ್ಯೆಯೊಬ್ಬಳು
ಕುಣಿದಾಡಿದಳು ಮೆಚ್ಚಿ ಹಾಡಿದಳು..



ಸ್ನೇಹದಲಿ ಪ್ರೀತಿಯಲಿ
ವರುಷಗಳು ಉರುಳಿದವು..
ಸುಮಧುರ ಸವಿ ಕ್ಷಣಗಳು
ಸಾವಿರಾರು ನೆನಪುಗಳು
ಸಿಕ್ಕಾಪಟ್ಟೆ ಉಡುಗೊರೆಗಳು
ಅವರಿಬ್ಬರ ಪ್ರೀತಿಯು ಬೆಳೆಯಲು..


ಅದೇನೆಂದು ನಾನರಿಯೇ..!!
ನಾಲ್ಕಾರು ವರುಷಗಳ ನಂತರ
ಮತ್ತೆಲ್ಲೋ ಓದಿದಳು ಪುಸ್ತಕಗಳ
ಸೊಗಸಾದ ಕವನಗಳ , ಕಥೆಗಳ..




ಮನಸ್ಸು ಅಲ್ಲಿ ಮಾಯವಾಗಿತ್ತು
ಏನೋ ಒಂದು ತರಹ ಜಾದೂ..
ಚೆಲುವೆಯು ಪ್ರಿಯತಮನ ಬಿಟ್ಟು
ಮತ್ತೊಬ್ಬನ ಬರವಣಿಗೆಯ ಮೋಡಿಗೆ
ಮನಸ್ಸಲ್ಲೇ ಸೋತು ಶರಣಾಗಿ
ಬರೆದವನ ಜೊತೆ ಓಡಿ ಹೋದಳು..!!




ಹಳೆ ಕವಿಯು ಅಲ್ಲೀಗ 
ದೇವದಾಸನಾದ..!!
ಕುಡಿದು ಕುಡಿದು ನರಳುತ್ತ
ಕಥೆ ಕವನ ಬರೆಯುವುದ
ಮರೆತು ಮಂಕಾಗಿ ಹೋದ..



ಈಗಿಲ್ಲಿ ನೀವೇ ಹೇಳಿ.. :)
ಈ ಪ್ರೀತಿಯ ನಾ ಏನೆಂದು ಕರೆಯಲಿ.. ?
|| ಪ್ರಶಾಂತ್ ಖಟಾವಕರ್ ||

***********************************

( ಈ ಕವನ ಬರೆಯಲು ಸ್ಫೂರ್ತಿ.. ಪ್ರಮೋದ್ ಅವರ ಒಂದು ಸಾಲು )
ನೀವೇನಾದರೂ ಅನ್ನಿ..
ನಾನು ಪ್ರೀತಿಯಂತಲೇ ಕರೆಯುತ್ತೇನೆ..
+++++++++++++++++++++++++++++++++++++++++++
ಪ್ರಣವ ಎಂಬ ಕಾವ್ಯನಾಮದೊಂದಿಗೆ ಅನೇಕ ಕವನಗಳಿವೆ.
ಅವುಗಳನ್ನು ವೀಕ್ಷಿಸಲು.. ಪ್ರಮೋದ್  ಅವರ ಬ್ಲಾಗ್ ಅಲ್ಲಿ ಭೇಟಿ ಕೊಡಿ..
ಈ ಕೆಳಗಿನ ಅವರ ಬ್ಲಾಗ್ ಹೆಸರನ್ನು ಒತ್ತಿರಿ..



2 comments:

  1. ಹುಡಗರಿಗೆನೊ ಅದು ಪ್ರೀತಿ, ಆದರೆ ಹುಡಗಿಯರಿಗೆ...?

    ReplyDelete
  2. ತುಂಬಾ ಸೊಗಸಾಗಿದೆ ಪ್ರಶಾಂತ್ ಸರ್.. :)) ನನ್ನ ಸಾಲುಗಳು ನಿಮಗೆ ಸ್ಪೂರ್ತಿಯಾಗಿದ್ದಕೆ., ತುಂಬಾ ಸಂತೋಷವಾಯಿತು ಪ್ರಶಾಂತ್ ಸರ್.., ಇದೊಂದು ರೀತಿ ನನ್ನ ಕತೆಯ ರೀತಿ ಇದೆ., ಆದರೆ ಅವಳು ಓಡಿ ಹೋದದ್ದು ಬರವಣಿಗೆ ನೆಚ್ಚಿ ಅಲ್ಲ.., ಮತ್ತೇನನ್ನೊ..!!

    ReplyDelete