Tuesday 8 November 2011

ಮದುವೆಯ ಊಟ


" ಗಂಡ ಹೆಂಡತಿ " ಚಿತ್ರದ ( ಮಾತು ಮುರಿದೆ... ಮಾತಾಡದೆ ಮೋಹಕ ಮೋಸವ ಮಾಡಿದೆ ).
ಇದಕ್ಕೆ ನಾ ಬರೆದ ಸಾಲುಗಳು....

ಊಟ ಮಾಡಿದೆ
ದುಡ್ಡಿಲ್ಲದೆ ಮದುವೆಯ ಊಟ ಮಾಡಿದೆ
ಪಲ್ಯ ಸ್ವಲ್ಪ ಉಪ್ಪಾಗಿದೆ
ಸಾರಿನ ಕಾರವು ಹೆಚ್ಚಾಗಿದೆ

ಹಾ ನಾಲಿಗೆ ಹಾ ನಾಲಿಗೆ ಹಾ ನಾಲಿಗೆ
ಆ.. ವು.. ವು..

ರುಚಿಯ ಗುಟ್ಟುನೂ ಮಸಾಲೆ
ಬೊಜ್ಜಿನ ಮೂಲವು ಮಸಾಲೆ
ಪರಿಮಳ ಕೊಡುವುದು ಮಸಾಲೆ
ಹೊಟ್ಟೆಯ ಕೆಡಿಸೋದು ಮಸಾಲೆ.... || ೨ ||

ಗಂಡಿನ ಕಡೆಯೋ ಹೆಣ್ಣಿನ ಕಡೆಯೋ
ಬಂದ ಜನರೆಲ್ಲಾ ಕೆಲ್ತಾರಲೋ

ಊಟ ಮಾಡಿದೆ
ದುಡ್ಡಿಲ್ಲದೆ ಮದುವೆಯ ಊಟ ಮಾಡಿದೆ
ಪಲ್ಯ ಸ್ವಲ್ಪ ಉಪ್ಪಾಗಿದೆ
ಸಾರಿನ ಕಾರವು ಹೆಚ್ಚಾಗಿದೆ

ಹಾ ನಾಲಿಗೆ ಹಾ ನಾಲಿಗೆ ಹಾ ನಾಲಿಗೆ
ಆ.. ವು.. ವು..

ಗಂಡಿಗೂ ಸಂಭಂದವಿಲ್ಲ
ಹೆಣ್ಣಿನ ಪರಿಚಯವಿಲ್ಲ
ಏನು ಹೇಳಲಿ ಜನರಿಗೆಲ್ಲ ಅರಿಯದೆ ಸುಮ್ಮನಿದ್ದೆ.... || ೨ ||

ಎದ್ದೊಡಲು ಯೋಚಿಸಿದೆ ಊಟ ಮುಗಿಸದೆ
ಅವಸರದಲೆಲ್ಲಾ ಹರಿದೋಯಿತು ಊಟದೆಲೆ

ಊಟ ಮಾಡಿದೆ
ದುಡ್ಡಿಲ್ಲದೆ ಮದುವೆಯ ಊಟ ಮಾಡಿದೆ
ಪಲ್ಯ ಸ್ವಲ್ಪ ಉಪ್ಪಾಗಿದೆ
ಸಾರಿನ ಕಾರವು ಹೆಚ್ಚಾಗಿದೆ

ಹಾ ನಾಲಿಗೆ ಹಾ ನಾಲಿಗೆ ಹಾ ನಾಲಿಗೆ
ಆ.. ವು.. ವು..




No comments:

Post a Comment